For the best experience, open
https://m.bcsuddi.com
on your mobile browser.
Advertisement

ಅಪ್ಪನಿಗೆ ಕೂದಲಿಲ್ಲ ಅಂತ ಕೇಶಮುಂಡನ ಮಾಡಿಸಿದ ನಟ ದರ್ಶನ್ ಮಗ ವಿನೀಶ್

09:42 AM Jul 16, 2024 IST | Bcsuddi
ಅಪ್ಪನಿಗೆ ಕೂದಲಿಲ್ಲ ಅಂತ ಕೇಶಮುಂಡನ ಮಾಡಿಸಿದ ನಟ ದರ್ಶನ್ ಮಗ ವಿನೀಶ್
Advertisement

ಬೆಂಗಳೂರು: ನಿನಗಿಲ್ಲದ ಕೂದಲು ನನಗ್ಯಾಕಪ್ಪ. ನೀನು ಕೂದಲು ತೆಗೆಸಿದ್ದಾಗ ನಾನು ಕೂದಲು ಬಿಟ್ಕೊಂಡು ಹೇಗೆ ಸ್ಟೈಲ್ ಮಾಡಲಿ ಅಂತ ತಂದೆ (ನಟ ದರ್ಶನ್)ಗಾಗಿ ಮಗ ವಿನೀಶ್ ಕೇಶಮುಂಡನ ಮಾಡಿಸಿದ್ದಾನೆ. ನಟ ದರ್ಶನ್ ಜೈಲಿನಲ್ಲಿ ವಿಗ್ ನಿರ್ವಹಣೆ ಮಾಡಲಾಗದೆ ವಿಗ್ ತೆಗೆದು ಕೇಶ ಮುಂಡನ ಮಾಡಿಸಿದ್ದಾರೆ. ಮೊದಲ ಬಾರಿ ತಂದೆಯನ್ನು ಜೈಲಿನಲ್ಲಿ ಮಗ ನೋಡಿದಾಗ ಭಾವುಕಾನಾಗಿದ್ದಾನೆ. ಮನೆಗೆ ಬಂದವನೇ ತಾನು ಕೇಶಮುಂದನ ಮಾಡಿಸಿರೋ ಮಗ ವಿನೀಶ್ ನೀನು ಹೆಡ್ ಶೇವ್ ಮಾಡಿರುವಾಗ ನಾನು ಹೇಗೆ ಕೂದಲು ಬಿಟ್ಕೊಂಡು ಓಡಾಡಲಿ. ನಿನ್ನ ತರ ನಾನೂ ಕೂದಲು ತೆಗೆಸಿದ್ದೀನಿ ಅಂತ ದರ್ಶನ್ ಮಗ ವಿನೀಶ್‌ನಿಂದ ತಂದೆ ಬಳಿ ಭಾವುಕವಾಗಿ ಹೇಳಿಕೊಂಡಿದ್ದಾನೆ. ನಿನಗೆ ಕೂದಲು ಇಲ್ಲದೆ ನೋಡೋಕಾಗುತ್ತಿಲ್ಲ ಅಪ್ಪ. ಅದಕ್ಕೆ ನಾನು ಕೂದಲು ತೆಗೆದಿದ್ದೇನೆ ಎಂಬ ಪ್ರೀತಿಯ ಮಗನ‌ ಮಾತು ಕೇಳಿ ದರ್ಶನ್ ಕಣ್ಣಲ್ಲಿ ನೀರು ತುಂಬಿಕೊಂಡಿದ್ರಂತೆ. ಈ ವೇಳೆ ಮಗನನ್ನು ತಬ್ಬಿ ಕಣ್ಣೀರು ಹಾಕಿ ನಟ ದರ್ಶನ್ ಭಾವುಕರಾಗಿದ್ದಾರೆ.

Author Image

Advertisement