ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಯುವಕ ಮೃತ್ಯು

12:07 PM Dec 30, 2023 IST | Bcsuddi
Advertisement

ಬೆಂಗಳೂರು: ಯುವಕನೋರ್ವ ಆಯತಪ್ಪಿ ಬಾಲ್ಕನಿಯಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಗ್ಗೆ 6.45ರ ಸುಮಾರಿಗೆ ಬೆಂಗಳೂರಿನ ಕೆಆರ್ ಪುರ ಬಳಿಯ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

Advertisement

ಮೃತ ಯುವಕನ್ನು ದಿಪಾಂಶು ಶರ್ಮಾ(27) ಎಂದು ಗುರುತಿಸಲಾಗಿದೆ.

ದಿಪಾಂಶು ಶರ್ಮಾ ತನ್ನ ಸ್ನೇಹಿತರೊಂದಿಗೆ ಅಪಾರ್ಟ್ ಮೆಂಟ್ ಯೊಂದರಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭ ಸಿಗರೇಟ್ ಸೇದಲೆಂದು ಬಾಲ್ಕನಿಗೆ ತೆರಳಿದ್ದಾರೆ. ಈ ವೇಳೆ ಅಚಾನಕ್ ಆಗಿ ಆಯತಪ್ಪಿ ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇನ್ನು ಈ ಬಗ್ಗೆ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Next Article