ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಪರಿಚಿತ ವ್ಯಕ್ತಿಯಿಂದ ಎರಡುವರೆ ವರ್ಷದ ಮಗು ಕಿಡ್ನಾಪ್‌ -ಪ್ರಕರಣ ದಾಖಲು

09:11 AM Nov 07, 2023 IST | Bcsuddi
Advertisement

ಚಿಕ್ಕಬಳ್ಳಾಫುರ: ಎರಡು ವರ್ಷದ ನಾಲ್ಕು ತಿಂಗಳ ಗಂಡು ಮಗುವನ್ನು ಅಪಹರಣ ಮಾಡಿದ ಘಟನೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿ ನ. 5 ರಂದು ನಡೆದಿದೆ.

Advertisement

ಬೆಂಗಳೂರು ಮೂಲದ ಜಬೀವುಲ್ಲಾ ಹಾಗೂ ಸುಮೈಯಾ ದಂಪತಿಯ ಮಗು ಜಾವೀದ್. ಅಜ್ಜ, ಅಜ್ಜಿ ಮತ್ತು ತಾಯಿಯೊಂದಿಗೆ ಮುರುಗಮಲ್ಲ ದರ್ಗಾಕ್ಕೆ ಮಧ್ಯಾಹ್ನ 3.22 ರ ಸಮಯದಲ್ಲಿ ದರ್ಗಾ ಒಳಗೆ ಹೋಗುತ್ತಿದ್ದಾಗ ಜನಸಂದಣಿ ನಡುವೆ ಮಗುವನ್ನು ಅಪಹರಣ ಮಾಡಲಾಗಿದ್ದು, ಇದರ ದೃಶ್ಯಾವಳಿ ದರ್ಗಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಪೋಷಕರು, ಮಗು ಪತ್ತೆ ಮಾಡಿಕೊಡುವಂತೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ನಿನ್ನೆ ಮಧ್ಯಾಹ್ನ ಕಿಡ್ನಾಪ್ ಆಗಿದ್ದರೂ ಇದುವರೆಗೂ ಮಗುವಿನ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

Advertisement
Next Article