For the best experience, open
https://m.bcsuddi.com
on your mobile browser.
Advertisement

ಅಪಘಾತಕ್ಕೆ ಕಾರಣವಾಗುವ ಚಾಲಕರಿಗೆ ಕನಿಷ್ಟ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜಕ್ಕೆ ಅನ್ಯಾಯ: ಹೈಕೋರ್ಟ್

10:58 AM May 09, 2024 IST | Bcsuddi
ಅಪಘಾತಕ್ಕೆ ಕಾರಣವಾಗುವ ಚಾಲಕರಿಗೆ ಕನಿಷ್ಟ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜಕ್ಕೆ ಅನ್ಯಾಯ  ಹೈಕೋರ್ಟ್
Advertisement

ಬೆಂಗಳೂರು: ನಿರ್ಲಕ್ಷ್ಯದಿಂದ ಆಂಬ್ಯುಲೆನ್ಸ್ ಚಲಾಯಿಸಿ ಮತ್ತೊಂದು ಕಾರಿನ ಚಾಲಕನ ಸಾವಿಗೆ ಕಾರಣವಾಗಿದ್ದ ಸವಾರನಿಗೆ ವಿಚಾರಣಾ ನ್ಯಾಯಲಯ ವಿಧಿಸಿದ್ದ 6 ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಅಷ್ಟೇ ಅಲ್ಲ ಅಜಾಗರೂಕವಾಗಿ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣರಾದವರಿಗೆ ಕನಿಷ್ಟ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜ ಮತ್ತು ಸಂತ್ರಸ್ತರಿಗೆ ಅನ್ಯಾಯಾ ಮಾಡಿದಂತಾಗಲಿದೆ ಎಂದು ಹೇಳಿದೆ. ಹಾಗಾಗಿ ತಪ್ಪೆಸಗಿದ್ದ ಆ ಚಾಲಕನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ.

ಶಿಕ್ಷೆಯನ್ನು ಖಚಿತ ಪಡಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡಿವಳೆ ತಾಲೂಕಿನ ಸಂತೋಷ್ ಎಂಬುವರು ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

Advertisement

Author Image

Advertisement