For the best experience, open
https://m.bcsuddi.com
on your mobile browser.
Advertisement

ಅನಧಿಕೃತ ಕೋಚಿಂಗ್ ಸೆಂಟರ್‍ಗಳ ಮೇಲೆ ಕಾನೂನು ಕ್ರಮ.!

07:29 AM Apr 21, 2024 IST | Bcsuddi
ಅನಧಿಕೃತ ಕೋಚಿಂಗ್ ಸೆಂಟರ್‍ಗಳ ಮೇಲೆ ಕಾನೂನು ಕ್ರಮ
Advertisement

ದಾವಣಗೆರೆ; ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಹಲವಾರು ಸಂಸ್ಥೆಗಳು ಜೆಇಇ, ನೀಟ್, ಸಿಇಟಿ, ಇತರೆ ಅಕಾಡೆಮಿ, ಟ್ಯೂಟೋರಿಯಲ್ ಸಂಸ್ಥೆಗಳನ್ನು ಅನಧಿಕೃತವಾಗಿ ನಡೆಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದು ಅಂತಹ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಪದವಿ ಪೂರ್ವ ಇಲಾಖೆ ಉಪನಿರ್ದೇಶಕರಾದ ಕರಿಸಿದ್ದಪ್ಪ ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ ಇಂತಹ ಕೋಚಿಂಗ್ ಸೆಂಟರ್‍ಗಳನ್ನು ಪ್ರಾರಂಭಿಸುವ ಮೂಲಕ ಅನಧಿಕೃತವಾಗಿ ಜಾಹಿರಾತು ನೀಡಿ ಸಾರ್ವಜನಿಕರಿಂದ ಮನಸು ಇಚ್ಚೆ ಹಣವನ್ನು ವಸೂಲಿ ಮಾಡುವುದು ಕಂಡು ಬಂದಿರುತ್ತದೆ. ಮತ್ತು ಕಾನೂನುಬಾಹಿರವಾಗಿ ವಿದ್ಯಾರ್ಥಿಗಳಿಗೆ ಪಾಠಗಳನ್ನು ಮಾಡುತ್ತಿರುವುದನ್ನು ಗಮನಿಸಲಾಗಿದೆ.

Advertisement

ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅನುಚ್ಚೇದ 35 ರ ಪ್ರಕಾರ ಮತ್ತು ಕರ್ನಾಟಕ ಟ್ಯೂಟೋರಿಯ ಇನ್ಸಿಟ್ಯೂಷನ್ಸ್  ನೊಂದಣಿ ಮತ್ತು ನಿಯಂತ್ರಣ ನಿಯಮಗಳು 2001 ರ ಪ್ರಕಾರ ಎಲ್ಲಾ ಕೋಚಿಂಗ್ ಸೆಂಟರ್‍ಗಳು ಕಡ್ಡಾಯವಾಗಿ ನೊಂದಣಿಯಾಗಬೇಕಾಗಿರುತ್ತದೆ.

ನೊಂದಣಿಯಾಗದೇ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಲ್ಲಿ ಅನಿರೀಕ್ಷಿತ ಭೇಟಿ ನೀಡಿ  ಕಾನೂನು ರೀತ್ಯ ಕ್ರಮ ಜರುಗಿಸಲಾಗವುದೆಂದು ತಿಳಿಸಿದ್ದಾರೆ.

Tags :
Author Image

Advertisement