ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಅಧಿಕಾರಕ್ಕೆ ಬಂದರೆ ಶ್ರಮಿಕ್ ನ್ಯಾಯ್ ,ಹಿಸ್ಸೇದಾರಿ ನ್ಯಾಯ್ ಗ್ಯಾರಂಟಿ' - ಖರ್ಗೆ ಘೋಷಣೆ

03:14 PM Mar 16, 2024 IST | Bcsuddi
Advertisement

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಸೆಳೆಯಲು ಇದೀಗ ಕಾಂಗ್ರೆಸ್ ಪಕ್ಷವು 'ಶ್ರಮಿಕ್ ನ್ಯಾಯ್' ಹಾಗೂ 'ಹಿಸ್ಸೇದಾರಿನ್ಯಾಯ್' ಎಂಬ ಎರಡು ಹೊಸ ಗ್ಯಾರಂಟಿಗಳನ್ನು ಘೋಷಿಸಿದೆ.

Advertisement

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಚುನಾವಣಾ ಆಯೋಗ ಇಂದು ಸಂಜೆ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡಲಿದೆ. ಹಾಗಾಗಿ , ದೆಹಲಿಯಿಂದ ಈ ಘೋಷಣೆಗಳನ್ನು ಮಾಡುವ ಬದಲು ಬೆಂಗಳೂರಿನಿಂದ ಮಾಡುತ್ತಿದ್ದೇನೆ ಎಂದು ಹೇಳಿದರು.

15 ಅಂಶಗಳ ಕಾರ್ಯಕ್ರಮ ನಾವು ರೂಪಿಸಿದ್ದೇವೆ. ಕಿಸಾನ್ ನ್ಯಾಯ್,ಯುವ ನ್ಯಾಯ್ ಗ್ಯಾರಂ ಟಿಗಳನ್ನು ಈಗಾಗಲೇ ಘೋ ಷಿಸಿದ್ದೇವೆ. ಶ್ರಮಿಕ್ ನ್ಯಾಯ್, ಹಿಸ್ಸೇ ದಾರ್ ನ್ಯಾಯ್ ಘೋ ಷಣೆಗಳು ಹಿಂದುಳಿದ ವರ್ಗಗಳು, ಬಡವರಿಗೆ ಅನುಕೂಲ ಆಗುವಂತದ್ದು, ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಅನ್ನುವ ಉದ್ದೇಶ.

ಸಾಮಾಜಿಕ, ರಾಜಕೀಯ ಸಮಾನತೆ ಎಲ್ಲರಿಗೆ ಸಿಗಬೇಕು. ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಕಾರ್ಯಕ್ರಮ, ಸಾಮಾಜಿಕ ನ್ಯಾಯ, ಕನಿಷ್ಠ ವೇತನ ಕಾಯ್ದೆ, ಭವಿಷ್ಯ ನಿಧಿ ಕಾಯ್ದೆ, ವಿಮೆ ಕಾಯ್ದೆ ಹೊಸ ಗ್ಯಾರಂಟಿಯಲ್ಲಿ ಇರಲಿದೆ. ನಮ್ಮ ಸರ್ಕಾರ ಬಂದರೆ ಇವುಗಳನ್ನು ಜಾರಿಗೆ ತರಲಿದೆ ಎಂದು ಭರವಸೆ ನೀಡಿದರು.

Advertisement
Next Article