ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅದ್ಭುತ ಪಾತ್ರದ ಮೂಲಕ ಮತ್ತೆ ತೆರೆಯ ಮೇಲೆ ಸಾಯಿ ಪಲ್ಲವಿ

10:57 AM Sep 28, 2024 IST | BC Suddi
Advertisement

ಚೆನ್ನೈ :ಸಾಯಿ ಪಲ್ಲವಿಯನ್ನು ಮತ್ತೆ ತೆರೆಯ ಮೇಲೆ ಯಾವಾಗ ನೋಡುವುದು ಎಂದು ಕಾದಿದ್ದ ಅಭಿಮಾನಿಗಳಿಗೆ ಒಂದು ಅದ್ಭುತ ಪಾತ್ರದ ಮೂಲಕ ಶಾಕ್ ಕೊಟ್ಟಿದ್ದಾರೆ ಸಾಯಿ ಪಲ್ಲವಿ.

Advertisement

ಸಾಯಿ ಪಲ್ಲವಿ ‘ಅಮರನ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದೆ. ವಿಶೇಷವೆಂದರೆ ಈ ಟೀಸರ್​ ಕೇವಲ ಸಾಯಿ ಪಲ್ಲವಿ ಪಾತ್ರಕ್ಕೆ ಮಾತ್ರವೇ ಸೀಮಿತ.ಸಿನಿಮಾದ ಕತೆ ವೀರ ಯೋಧನ ಕತೆಯಾಗಿದ್ದರೂ ಸಹ ಚಿತ್ರತಂಡ ಸಾಯಿ ಪಲ್ಲವಿ ಪಾತ್ರದ ಟೀಸರ್ ಅನ್ನು ಮಾತ್ರವೇ ಬಿಡುಗಡೆ ಮಾಡಲಾಗಿದೆ.

‘ಅಮರನ್’ ಸಿನಿಮಾ ವೀರಯೋಧ ಮೇಜರ್ ಮುಕುಂದ ವರದಾರಜನ್ ಅವರ ನಿಜ ಜೀವನದ ಕತೆಯನ್ನು ಆಧರಿಸಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿ, ಮೇಜರ್ ಮುಕುಂದ ವರದಾರಜನ್ ಅವರ ಪತ್ನಿ ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ.

 

Advertisement
Next Article