For the best experience, open
https://m.bcsuddi.com
on your mobile browser.
Advertisement

ಅದಾನಿ ಗ್ರೂಪ್‌ಗೆ ಹೊಡೆತ ಕೊಟ್ಟ ಹಿಂಡೆನ್‌ಬರ್ಗ್ ವರದಿ.! - 10ರಲ್ಲಿ 9 ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ

02:29 PM Aug 12, 2024 IST | BC Suddi
ಅದಾನಿ ಗ್ರೂಪ್‌ಗೆ ಹೊಡೆತ ಕೊಟ್ಟ ಹಿಂಡೆನ್‌ಬರ್ಗ್ ವರದಿ     10ರಲ್ಲಿ 9 ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ
Advertisement

ನವದೆಹಲಿ: ಅಮೆರಿಕದ ಶಾರ್ಟ್-ಸೆಲ್ಲರ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್‌ನ ಆರೋಪಗಳು ಮತ್ತೊಮ್ಮೆ ಸಂಚಲನವನ್ನು ಸೃಷ್ಟಿಸುತ್ತಿವೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲು ಬಳಸಿದ ಮಾರಿಷಸ್ ನಿಧಿಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಪಾಲು ಹೊಂದಿದ್ದಾರೆ ಎಂಬ ಹಿಂಡೆನ್‌ಬರ್ಗ್ ಆರೋಪಗಳು ಷೇರುಪೇಟೆಗಳ ಮೇಲೆ ಗಂಭೀರ ಪರಿಣಾಮ ಬೀರಿವೆ.

ಇದರಿಂದಾಗಿ ಅದಾನಿ ಗ್ರೂಪ್‌ನ 10ರಲ್ಲಿ 9 ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡಿವೆ. ಅದರಲ್ಲೂ ಅದಾನಿ ಎನರ್ಜಿ ಸಲ್ಯೂಷನ್ಸ್ ಶೇಕಡಾ 17 ರಷ್ಟು ನಷ್ಟವನ್ನು ಅನುಭವಿಸಿದೆ. ಮಧ್ಯಾಹ್ನ 12.15ರ ವೇಳೆಗೆ ಅದಾನಿ ಸಮೂಹಕ್ಕೆ ಸೇರಿದ 10 ಷೇರುಗಳಲ್ಲಿ 9 ನಷ್ಟದಲ್ಲಿದ್ದವು. ಅಂಬುಜಾ ಸಿಮೆಂಟ್ಸ್‌ ಮಾತ್ರ ಲಾಭದಲ್ಲಿತ್ತು. ಅದು ಕೂಡ ದಿನದ ಆರಂಭದಲ್ಲಿ ನಷ್ಟದಲ್ಲೇ ವಹಿವಾಟು ಆರಂಭಿಸಿ ಸದ್ಯ ಅಲ್ಪ ಲಾಭದಲ್ಲಿದೆ.

ಅದಾನಿ ಟೋಟಲ್ ಗ್ಯಾಸ್ ಶೇ.13.39, ಎನ್​ಡಿಟಿವಿ ಶೇ.11 ಮತ್ತು ಅದಾನಿ ಪವರ್ ಶೇ.10.94 ರಷ್ಟು ಕುಸಿದಿದೆ. ಅದಾನಿ ಗ್ರೀನ್ ಎನರ್ಜಿ ಶೇರುಗಳು ಶೇಕಡಾ 6.96, ಅದಾನಿ ವಿಲ್ಮರ್ ಶೇಕಡಾ 6.49, ಅದಾನಿ ಎಂಟರ್‌ಪ್ರೈಸಸ್ ಶೇಕಡಾ 5.43, ಅದಾನಿ ಪೋರ್ಟ್ಸ್ ಶೇಕಡಾ 4.95, ಡೈವ್ಡ್, ಅಂಬುಜಾ ಸಿಮೆಂಟ್ಸ್ ಶೇಕಡಾ 2.53 ಮತ್ತು ಎಸಿಸಿ ಶೇಕಡಾ 2.42 ರಷ್ಟು ಕುಸಿದಿವೆ.

Advertisement

Author Image

Advertisement