For the best experience, open
https://m.bcsuddi.com
on your mobile browser.
Advertisement

ಅಣ್ಣಾವ್ರ ಗಂಧದ ಗುಡಿ ಬಗ್ಗೆ ಪವನ್ ಕಲ್ಯಾಣ್ ಮಾತು

08:24 PM Aug 08, 2024 IST | BC Suddi
ಅಣ್ಣಾವ್ರ ಗಂಧದ ಗುಡಿ ಬಗ್ಗೆ ಪವನ್ ಕಲ್ಯಾಣ್ ಮಾತು
Advertisement

ಬೆಂಗಳೂರು: ವಿಧಾನಸೌಧದಲ್ಲಿ ಇಂದು ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ ಸಭೆಯಲ್ಲಿ ಭಾಗಿಯಾಗಿದ್ದ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅರಣ್ಯ ಇಲಾಖೆಯ ಸಭೆಯ ನಂತರ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು. ನನಗೆ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಇದೆ. ಕನ್ನಡದಲ್ಲಿ ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ಡಾ. ರಾಜ್‌ಕುಮಾರ್ ಸಿನಿಮಾ ಮಾಡಿದ್ದಾರೆ. ಗಂಧದ ಗುಡಿ ಸಿನಿಮಾದಲ್ಲಿ ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಇರುವ ಅರಣ್ಯ ಸಂಪತ್ತು ರಕ್ಷಣೆ ಬಹಳಷ್ಟು ಮುಖ್ಯವಾಗಿ ತೋರಿಸಿದ್ದಾರೆ ಎಂದರು ಪವನ್ ಕಲ್ಯಾಣ್ ತಿಳಿಸಿದರು. ಕರ್ನಾಟಕದ ಜನರ ಪ್ರೀತಿಗೆ ಪಾತ್ರನಾಗಬೇಕು ಎಂದು ಬಯಸುತ್ತೇನೆ. ಕನ್ನಡ ಕಲಿಬೇಕು, ಕನ್ನಡದಲ್ಲೇ ಮುಂದೆ ಮಾತನಾಡಬೇಕು ಎಂದು ನಿರ್ಧಾರ ಮಾಡಿದ್ದೇನೆ. ಕನ್ನಡಿಗರು ಕೂಡ ನನಗೆ ಸಿನಿಮಾ ನಟನಾಗಿ ಬಹಳ ಪ್ರೀತಿ ನೀಡಿದ್ದಾರೆ. ರಾಜ್‌ಕುಮಾರ್ ಅವರ ಗಂಧದಗುಡಿ ಸಿನಿಮಾ ಮೂಲತಃ ಇರುವುದೇ ಅರಣ್ಯ ಸಂರಕ್ಷಣೆ ಬಗ್ಗೆ. ವಸುಧೈವ ಕುಟುಂಬಕಂ ಎಂಬ ಹಾಗೇ ನಾವು ನಮ್ಮ ಭೂಮಿ ತಾಯಿಯನ್ನು ರಕ್ಷಣೆ ಮಾಡಬೇಕಿದೆ. ಇಂದು ಏಳು ವಿಷಯಗಳ ಮೇಲೆ ಚರ್ಚೆ ಮಾಡಿದ್ದೇವೆ. MOU ಸಹಿ ಹಾಕುವ ಸಂದರ್ಭದಲ್ಲಿ ನಾನು ಸಾಧ್ಯವಾದರೆ ಹಾಜರಿ ಇರುತ್ತೇನೆ. ರಕ್ತ ಚಂದನ ಸಂರಕ್ಷಣೆ ಗೆ ಸಂಬಂಧಿಸಿ ನಾನು ಸುದ್ದಿ ನೋಡಿದೆ..140 ಕೋಟಿ ಮೌಲ್ಯದ ರಕ್ತ ಚಂದನ ಕರ್ನಾಟಕದಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಶ್ರೀಶೈಲಂ ಹಾಗೂ ತಿರುಮಲದಲ್ಲಿ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿ ನಾನು ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ. ಇಂದು ಬೆಳಗ್ಗೆ ಸಿದ್ದರಾಮಯ್ಯ ಭೇಟಿ ಕೂಡ ಮಾಡಿ ಬಂದಿದ್ದೇನೆ ಎಂದರು.

Author Image

Advertisement