ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಡಿಕೆ ರಸಂ ತಯಾರಿಸುವ ವಿಧಾನ: ಬಾಯಿ ಚಪ್ಪರಿಸಿ ಸವಿಯಿರಿ

09:11 AM Sep 27, 2024 IST | BC Suddi
Advertisement

ಅಡಿಕೆ ಆಹಾರ ಜೀರ್ಣಕ್ಕೆ ಸಹಾಯ ಮಾಡುವ ಪುಟ್ಟ ಕಾಯಿ. ಪೂಜಾ ಕಾರ್ಯಗಳು ಇದು ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಕೆಲಸದ ವೇಳೆ ನಿದ್ದೆ ಬಂದರೆ ಇದನ್ನು ಅಗಿಯುವವರ ಸಂಖ್ಯೆ ನಮ್ಮ ನಡುವೆ ಹೆಚ್ಚಾಗಿದೆ. ಅಷ್ಟು ಮಾತ್ರವಲ್ಲದೆ ಇದು ಆರೋಗ್ಯಕ್ಕೆ ನಾನಾ ಪ್ರಯೋಜನಗಳನ್ನು ನೀಡುತ್ತದೆ.

Advertisement

ಗಂಭೀರ ಕಾಯಿಲೆಗಳನ್ನು ಗುಣಪಡಿಸುವ ಪೋಷಕಾಂಶಗಳನ್ನು ಅಡಿಕೆ ಹೊಂದಿದೆ. ಹೀಗಾಗಿ ಇದನ್ನು ಊಟದ ನಂತರ ಸೇವಿಸಲಾಗುತ್ತದೆ, ವಿವಿಧ ಔಷಧ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಅಷ್ಟೇ ಯಾಕೆ ಇದರಿಂದ ಚಹಾ ಕೂಡ ಮಾಡಲಾಗುತ್ತದೆ. ಮಾತ್ರವಲ್ಲದೆ ಇದರಿಂದ ರಸಂ ಕೂಡ ತಯಾರಿಸಲಾಗುತ್ತದೆ. ಹೌದು… ಅಡಿಕೆಯಿಂದ ರುಚಿಕರವಾಗಿ ರಸಂ ತಯಾರಿಸಿ ಸವಿಯಬಹುದು.

 

ಹಾಗಾದರೆ ಅಡಿಕೆ ರಸಂ ತಯಾರಿಸುವುದು ಹೇಗೆ? ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಯಾವವು? ಎಂದು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ತಯಾರಿಸಿ. ನಿಮ್ಮ ಅನುಭವವನ್ನು ಕಾಮೆಂಟ್‌ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ಅಡಿಕೆ ರಸಂ ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಬೇಕಾಗುವ ಪದಾರ್ಥಗಳು:
* ಅಡಿಕೆ 5-6

* ಟೊಮೆಟೋ 2

* ಜೀರಿಗೆ ಒಂದೂವರೆ ಚಮಚ

* ಕಾಳುಮೆಣಸು 1

* ಹುಣಸೆ ರಸ 1 ಚಮಚ

* ಒಣಮೆಣಸಿನಕಾಯಿ ಪುಡಿ 1 ಚಮಚ

* ಬೆಲ್ಲ-ಅರ್ಧ ಚಮಚ

* ಉಪ್ಪು-ರುಚಿಗೆ ತಕ್ಕಷ್ಟು

* ನೀರು- ಹದಕ್ಕೆ ತಕ್ಕಷ್ಟು ಇರಲಿ

* ಅರಿಶಿಣ ಚಿಟಿಕೆ

* ರಸಂ ಪುಡಿ- ಒಂದು ಚಮಚ

ಕರಿಬೇವು – ಒಂದು ಎಸಳು

* ಕೊತ್ತಂಬರಿ ಸೊಪ್ಪು-ಸ್ವಲ್ಪ

* ಎಣ್ಣೆ ಒಗ್ಗರಣೆಗೆ ಬೇಕಾದಷ್ಟು

* ಜೀರಿಗೆ, ಇಂಗು, ಒಣಮೆಣಸಿನಕಾಯಿ

 

ತಯಾರಿಸುವ ವಿಧಾನ

* ಅಡಿಕೆಯನ್ನು ಕುಟ್ಟಿ ಸ್ವಲ್ಪ ಪುಟ್ಟಿ ಮಾಡಿ ನಂತರ ಅದನ್ನು ಹೊರಳು ಅಥವಾ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ

* ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಮೂರರಿಂದ ನಾಲ್ಕು ಚಮಚ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ಬಳಿಕ ಅದಕ್ಕೆ ಜೀರಿಗೆ, ಕಾಳುಮೆಣಸು ಹಾಕಿ, ಕರಿಬೇವಿನ ಎಲೆಯನ್ನು ಹಾಕಿ ಹುರಿಯಿರಿ

* ಜೀರಿಗೆ ಕೆಂಪಾದ ಬಳಿಕ ಹೆಚ್ಚಿದ ಟೊಮೆಟೊ ಹಾಕಿ ಬಾಡಿಸಿಕೊಳ್ಳಿ, ಬಳಿಕ ಇದಕ್ಕೆ ಹುಣಸೆ ರಸ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ.

ಬಳಿಕ ಇದಕ್ಕೆ ಅಡಿಕೆ ಪುಡಿ, ಬೆಲ್ಲ, ಉಪ್ಪು ಹಾಕಿ ಕೈಯಾಡಿಸಿ.

 

ನಂತರ ಇದಕ್ಕೆ ರಸಂ ಹದಕ್ಕೆ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಕುದಿಯಲು ಬಿಡಿ

* ಬಳಿಕ ಅರಿಶಿಣ, ರಸಂ ಪುಡಿ, ಒಣ ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ಹುದಿಯಲು ಬಿಡಿ

* ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬಿಡಿ

* ಕೊನೆಯಲ್ಲಿ ಇದಕ್ಕೆ ಒಗ್ಗರಣೆ ತಯಾರಿಸಿ, ಒಂದು ಪಾತ್ರೆಯಲ್ಲಿ ಎರ್ಣನೆ ಹಾಕಿ ಬಿಸಿಯಾದ ಬಳಿಕ ಜೀರಿಗೆ, ಸ್ವಲ್ಪ ಇಂಗು, ಒಣಮೆಣಸಿನಕಾಯಿ ಹಾಕಿ ಹುರಿದ ಬಳಿಕ ರಸಂಗೆ ಬೆರೆಸಿದರೆ ರುಚಿರಕವಾದ ರಸಂ ಸವಿಯಲು ಸಿದ್ಧ.

Advertisement
Next Article