For the best experience, open
https://m.bcsuddi.com
on your mobile browser.
Advertisement

ಅಜ್ಜನ ಮಡಿಲಿನಲ್ಲಿದ್ದ ಮಗುವಿನ ಮೇಲೆ ಪಿಟ್ ಬುಲ್ ನಾಯಿ ದಾಳಿ - ದೃಶ್ಯ ಸಿಸಿಟಿವಿಯಲ್ಲಿ ಸೆರೆ

02:51 PM Jan 20, 2024 IST | Bcsuddi
ಅಜ್ಜನ ಮಡಿಲಿನಲ್ಲಿದ್ದ ಮಗುವಿನ ಮೇಲೆ ಪಿಟ್ ಬುಲ್ ನಾಯಿ ದಾಳಿ   ದೃಶ್ಯ ಸಿಸಿಟಿವಿಯಲ್ಲಿ ಸೆರೆ
Advertisement

ನವದೆಹಲಿ:ಅಜ್ಜನ ಮಡಿಲಿನಲ್ಲಿದ್ದ ಒಂದೂವರೆ ವರ್ಷದ ಹೆಣ್ಣು ಮಗುವೊಂದರ ಮೇಲೆ ಪಿಟ್ ಬುಲ್ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ದೆಹಲಿಯ ಬುರಾರಿಯಲ್ಲಿ ನಡೆದಿದೆ.

ಪಿಟ್ ಬುಲ್ ಮಗುವಿನ ಮೇಲೆ ದಾಳಿ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಗಾಯಗೊಂಡ ಬಾಲಕಿ 17 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ವೈದ್ಯರು 18 ಹೊಲಿಗೆಗಳನ್ನು ಹಾಕಿದ್ದಾರೆ. ನಾಯಿಯ ಮಾಲೀಕರು ಮತ್ತು ಆರೇಳು ವ್ಯಕ್ತಿಗಳು ಪಿಟ್ ಬುಲ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಸಿಸಿಟಿವಿಯಲ್ಲಿ ದೃಶ್ಯದಲ್ಲಿ ಕಾಣಬಹುದು.

Advertisement

ಇನ್ನು ದೂರು ನೀಡಿದರೂ ಪೊಲೀಸರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

Author Image

Advertisement