For the best experience, open
https://m.bcsuddi.com
on your mobile browser.
Advertisement

ಅಕ್ರಮವಾಗಿ ಸಾಗಿಸುತ್ತಿದ್ದ 63.5 ಲಕ್ಷ ರೂ. ಮೌಲ್ಯದ ಡೈಮಂಡ್ ವಶ: ಓರ್ವನ ಬಂಧನ

09:41 AM Feb 27, 2024 IST | Bcsuddi
ಅಕ್ರಮವಾಗಿ ಸಾಗಿಸುತ್ತಿದ್ದ 63 5 ಲಕ್ಷ ರೂ  ಮೌಲ್ಯದ ಡೈಮಂಡ್ ವಶ  ಓರ್ವನ ಬಂಧನ
Advertisement

ಅಕ್ರಮವಾಗಿ ಸಾಗಿಸುತ್ತಿದ್ದ 63.5 ಲಕ್ಷ ಮೌಲ್ಯದ ಡೈಮಂಡ್ ​ ಮತ್ತು 9.2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ನಡೆದಿದೆ. ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇಂಡಿಗೋ ಫ್ಲೈಟ್​ನಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಪ್ರಯಾಣಿಕ ಬಂದಿದ್ದ. ಅನುಮಾನಗೊಂಡು ಪ್ರಯಾಣಿಕನ ಬ್ಯಾಗ್ ಪರಿಶೀಲನೆ ವೇಳೆ ಅಕ್ರಮವಾಗಿ 2348 ಕ್ಯಾರೆಟ್​ನ ವಿವಿಧ ವೆರೈಟಿಗಳ ರೂಬಿ ಮತ್ತು ಡೈಮಂಡ್ಸ್​ಗಳು ಪತ್ತೆ ಆಗಿದ್ದು ವಶಕ್ಕೆ ಪಡೆಯಲಾಗಿದೆ. ಸದ್ಯ ಪ್ರಯಾಣಿಕನ ಬಂಧನ ಮಾಡಿದ್ದು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Author Image

Advertisement