For the best experience, open
https://m.bcsuddi.com
on your mobile browser.
Advertisement

ಅಂಚೆ ಮತದಾನದಲ್ಲಿ ಎನ್‌ಡಿಎ 304, ಇಂಡಿಯಾ ಕೂಟ 167, ಇತರೆ 30 ಕ್ಷೇತ್ರಗಳಲ್ಲಿ ಮುನ್ನಡೆ

09:41 AM Jun 04, 2024 IST | Bcsuddi
ಅಂಚೆ ಮತದಾನದಲ್ಲಿ ಎನ್‌ಡಿಎ 304  ಇಂಡಿಯಾ ಕೂಟ 167  ಇತರೆ 30 ಕ್ಷೇತ್ರಗಳಲ್ಲಿ ಮುನ್ನಡೆ
Advertisement

ಬೆಂಗಳೂರು: 2024 ರ ಲೋಕಸಭಾ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು, ಈಗಾಗಲೇ ಅಂಚೆ ಮತದಾನದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬೆಳಗ್ಗೆ 8:52 ರ ಹೊತ್ತಿಗೆ ಎನ್‌ಡಿಎ 304, ಐಎನ್‌ಡಿಐಎ 167 ಹಾಗೂ ಇತರೆ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್‌ 4 ಮತ್ತು ಜೆಡಿಎಸ್‌ 2 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್‌ ಮುನ್ನಡೆ ಸಾಧಿಸಿದ್ದಾರೆ.

ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಮಧ್ಯಾಹ್ನದ ಹೊತ್ತಿಗೆ ಎಲ್ಲ ಕ್ಷೇತ್ರದ ಫಲಿತಾಂಶದ ಸಂಪೂರ್ಣ ಚಿತ್ರಣ ಹೊರಬರಲಿದೆ.

Advertisement

Author Image

Advertisement