For the best experience, open
https://m.bcsuddi.com
on your mobile browser.
Advertisement

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆ ಹಾಗೂ ಮೀಸಲಾತಿ : ಅರ್ಜಿ ಆಹ್ವಾನ

07:51 AM Aug 06, 2024 IST | BC Suddi
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆ ಹಾಗೂ ಮೀಸಲಾತಿ   ಅರ್ಜಿ ಆಹ್ವಾನ
Advertisement

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ನಿವೃತ್ತಿ, ಇತರೆ ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹೊಳಲ್ಕೆರೆ ತಾಲ್ಲೂಕಿನಾದ್ಯಂತ 9 ಅಂಗನವಾಡಿ ಕಾರ್ಯಕರ್ತೆ, 1 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು 14 ಅಂಗನವಾಡಿ ಸಹಾಯಕಿರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಇಲಾಖೆಯ ವೆಬ್ಸೆöÊಟ್  www.anganwadirecuruit.kar.nic.in      ತಂತ್ರಾAಶದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ರಿಂದ 35 ವರ್ಷ ವಯೋಮಿತಿಯೊಳಗಿರಬೇಕು.

ಅಂಗನವಾಡಿ ಕಾರ್ಯಕರ್ತೆ ಮೀಸಲಾತಿ ವಿವರ:

Advertisement

ತಾಳಿಕಟ್ಟೆ ಗ್ರಾ.ಪಂ.ನ ತಾಳಿಕಟ್ಟೆ-ಎಫ್, ತುಪ್ಪದಹಳ್ಳಿ ಗ್ರಾ.ಪಂ.ನ ಸಿಂಗೇನಹಳ್ಳಿ, ಅರೇಹಳ್ಳಿ ಗ್ರಾ.ಪಂ.ನ ಜೈಪುರ, ಮುತ್ತುಗದೂರು ಗ್ರಾ.ಪಂ.ನ ಕಾಗಳಗೆರೆ ಗೊಲ್ಲರಹಟ್ಟಿ, ಅಂದನೂರು ಗ್ರಾ.ಪಂ.ನ ಅಂದನೂರು-ಬಿ, ಶಿವಗಂಗಾ ಗ್ರಾ.ಪಂ.ನ ಶಿವಗಂಗಾ-ಎ, ಗುಂಜಿಗೂರು ಗ್ರಾ.ಪಂ.ನ ಎಸ್.ಹೆಚ್.ಹಳ್ಳಿ ಅಂಗನವಾಡಿ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಇತರೆ ವರ್ಗಕ್ಕೆ ಹಾಗೂ ಚಿಕ್ಕೆಮ್ಮಿಗನೂರು ಗ್ರಾ.ಪಂ.ನ ಕೊಡಗವಳ್ಳಿ ಹಟ್ಟಿ ಪರಿಶಿಷ್ಟ ಪಂಗಡಕ್ಕೆ ಹಾಗೂ ಗುಂಡೇರಿ ಗ್ರಾ.ಪಂ.ನ ಗುಂಡೇರಿ ಕಾವಲ್ ಅಂಗನವಾಡಿ ಕೇಂದ್ರ ಪರಿಶಿಷ್ಟ ಜಾತಿಗೆ ಮತ್ತು ಅಂದನೂರು ಗ್ರಾ.ಪಂ. ನ ಇಂಗಳದಹಳ್ಳಿ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಅಂಗನವಾಡಿ ಸಹಾಯಕಿಯರ ಮೀಸಲಾತಿ ವಿವರ:

ಗುಂಡೇರಿ ಗ್ರಾ.ಪಂ.ನ ಮಾಳೇನಹಳ್ಳಿ, ಆರ್.ನುಲೇನೂರ್ ಗ್ರಾ.ಪಂ.ನ ಬಸಾಪುರ, ಅರೇಹಳ್ಳಿ ಗ್ರಾ.ಪಂ.ನ ಅರೇಹಳ್ಳಿ ಆರ್.ಎಸ್, ಶಿವಪುರ ಗ್ರಾ.ಪಂ.ನ ಅಗ್ರಹಾರ, ರಾಮಗಿರಿ ಗ್ರಾ.ಪಂ.ನ ರಾಮಗಿರಿ-ಎ ಹಾಗೂ ದಾಸೀಕಟ್ಟೆ, ಗಂಗಸಮುದ್ರ ಗ್ರಾ.ಪಂ.ನ ತಾಳಕಟ್ಟ-ಎ, ಬಿದರಕೆರೆ ಗ್ರಾ.ಪಂ.ನ ಬಿದರಕೆರೆ, ಉಪ್ಪರಿಗೇನಹಳ್ಳಿ ಗ್ರಾ.ಪಂ.ನ ಗೊಲ್ಲರಹಟ್ಟಿ ಅಂಗನವಾಡಿ ಕೇಂದ್ರ ಅಂಗನವಾಡಿ ಸಹಾಯಕಿಯರ ಹುದ್ದೆ ಇತರೆ ವರ್ಗಕ್ಕೆ ಮೀಸಲಿವೆ. ಉಳಿದಂತೆ ತಾಳ್ಯ ಗ್ರಾ.ಪಂ.ನ ವೆಂಕಟೇಶಪುರ,ಅAದನೂರು ಗ್ರಾ.ಪಂ.ನ ಗಂಜಿಗಟ್ಟಿ ಲಂಬಾಣಿಹಟ್ಟಿ, ಚಿತ್ರಹಳ್ಳಿ ಗ್ರಾ.ಪಂ.ನ ಚಿತ್ರಹಳ್ಳಿ ಗೇಟ್ ಮತ್ತು ಹೊಳಲ್ಕೆರೆ ನಗರದ ವಾರ್ಡ ನಂ-16 ರ ಎ.ಕೆ. ಕಾಲೋನಿ ಅಂಗನವಾಡಿ ಕೇಂದ್ರದ ಪರಿಶಿಷ್ಟ ಜಾತಿಗೆ ಹಾಗೂ ರಾಮಗಿರಿ ಗ್ರಾ.ಪಂ.ನ ರಾಮಗಿರಿ-ಸಿ ಅಂಗನವಾಡಿ ಕೇಂದ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹೊಳಲ್ಕೆರೆ ನಗರದ ಎನ್.ಹೆಚ್.-13 ರಸ್ತೆಯ ಹರಿಕೃಪ ಬಿಲ್ಡಿಂಗ್ ನಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹದು ಎಂದು ಪ್ರಕಟಣೆ ತಿಳಿಸಿದೆ.

Author Image

Advertisement