ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ʼಕ್ಯಾಪ್ಸಿಕಂ ರೈಸ್ʼ ಮಾಡುವ ವಿಧಾನ

09:07 AM Jun 08, 2024 IST | Bcsuddi
Advertisement

ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೆಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು ಅಕ್ಕಿ 1 ಕಪ್ ದುಂಡು ಮೆಣಸಿನಕಾಯಿ 2 (ಹಳದಿ, ಕೆಂಪು ಅಥವಾ ಹಸಿರು ಬಣ್ಣದು) ಈರುಳ್ಳಿ 1 (ಕತ್ತರಿಸಿದ್ದು) ಹಸಿಮೆಣಸಿನ ಕಾಯಿ 3-4 ಅರಿಶಿಣ ಪುಡಿ 1/4 ಚಮಚ ಜೀರಿಗೆ ಸ್ವಲ್ಪ ಸಾಸಿವೆ ಸ್ವಲ್ಪ ಎಣ್ಣೆ ಸ್ವಲ್ಪ ಗೋಡಂಬಿ (ಅಗತ್ಯವೆನಿಸಿದರೆ) ಕೊತ್ತಂಬರಿ ಸೊಪ್ಪು ಸ್ವಲ್ಪ ನಿಂಬೆ ರಸ ತುಪ್ಪ ರುಚಿಗೆ ತಕ್ಕಷ್ಟು ಉಪ್ಪು

Advertisement

ಮಾಡುವ ವಿಧಾನ ಅಕ್ಕಿಯನ್ನು ಬೇಯಿಸಿಕೊಂಡು ಅನ್ನ ಮಾಡಿಕೊಳ್ಳಿ ತುಂಬಾ ಬೇಯಿಸಬೇಡಿ. ಸ್ವಲ್ಪ ಹುಡಿಹುಡಿಯಾಗಿರಲಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾದ ಬಳಿಕ ಸಾಸಿವೆ ಮತ್ತು ಜೀರಿಗೆ ಹಾಕಬೇಕು. ಚಟಪಟ ಸಿಡಿದ ಮೇಲೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ತದನಂತರ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಮೆದುವಾಗುವವರೆಗೆ ಹುರಿಯಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಬಳಿಕ ಸಿದ್ಧಪಡಿಸಿದ ಮಸಾಲೆಗೆ ಅನ್ನ ಹಾಗೂ ಅರಿಶಿಣದ ಜೊತೆಗೆ ಸ್ವಲ್ಪ ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಗೋಡಂಬಿ ಬೇಕು ಎನಿಸಿದರೆ ಸ್ವಲ್ಪ ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಅದನ್ನು ಕೊತ್ತೊಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ಕ್ಯಾಪ್ಸಿಕಂ ರೈಸ್ ಸಿದ್ಧವಾಗುತ್ತದೆ.

Advertisement
Next Article