ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ʼಅಜೀರ್ಣʼಕ್ಕೆ ಪರಿಹಾರ ನಿಂಬೆಹುಳಿ ಸಾಂಬಾರ್

09:09 AM Jun 06, 2024 IST | Bcsuddi
Advertisement

ಬೇಕಾಗುವ ಸಾಮಾಗ್ರಿಗಳು: ನಿಂಬೆ – 5, ಶುಂಠಿ – ಒಂದು ಇಂಚಷ್ಟು, ಬೆಲ್ಲ – 2 ಟೀ ಸ್ಪೂನ್, ಕರಿಮೆಣಸು – 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ – 2 ಟೀ ಸ್ಪೂನ್, ಒಣಮೆಣಸಿನಕಾಯಿ – 1, ಸಾಸಿವೆ – ಸ್ವಲ್ಪ, ಬೆಳ್ಳುಳ್ಳಿ ಎಸಳು – 2, ಕರಿಬೇವುಸೊಪ್ಪು.

Advertisement

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಸುಮಾರು 1 ಲೀ.ನಷ್ಟು ನೀರು ತೆಗೆದುಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಿ ಚೆನ್ನಾಗಿ ಕುದಿಸಬೇಕು. ಕರಿಮೆಣಸನ್ನು ಪುಡಿ ಮಾಡಿಕೊಳ್ಳಬೇಕು. ಜೊತೆಗೆ ಶುಂಠಿಯನ್ನು ಕೂಡ ಚೆನ್ನಾಗಿ ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಸೇರಿಸಬೇಕು. ನಂತರ ನಿಂಬೆಹುಳಿಯ ರಸ ಹಿಂಡಿ ಚೆನ್ನಾಗಿ ಕುದಿದ ರಸಕ್ಕೆ ಸೇರಿಸಿ ಕೂಡಲೇ ಸ್ಟೌನಿಂದ ಇಳಿಸಬೇಕು. ನಂತರ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಜಜ್ಜಿದ ಬೆಳ್ಳುಳ್ಳಿ, 1 ಒಣಮೆಣಸಿನಕಾಯಿ, ಸಾಸಿವೆ ಹಾಕಿ. ಇದು ಸಿಡಿದ ಕೂಡಲೇ ಕರಿಬೇವುಸೊಪ್ಪು ಹಾಕಿ. ಈ ಒಗ್ಗರಣೆಯನ್ನು ಸಾಂಬಾರಿಗೆ ಸೇರಿಸಿದರೆ ನಿಂಬೆ ಸಾಂಬಾರ್ ರೆಡಿ. ಊಟದ ಜತೆ ಅಥವಾ ಹಾಗೆಯೇ ಕೂಡ ಇದನ್ನು ಸೇವಿಸಬಹುದು. ಅಜೀರ್ಣ ಸಮಸ್ಯೆಯಿದ್ದವರು ಈ ಸಾಂಬಾರ್ ಸೇವಿಸಿದರೆ ಶೀಘ್ರ ಪರಿಹಾರ ದೊರಕುತ್ತದೆ.

Advertisement
Next Article